ಹೆಸರಿನ ತಲೆಬಿಸಿ

ಆಗ ಅಮ್ಮನ ತೊಡೆಯ ಮ್ಯಾಲೆ ಬೆಚ್ಚಗೆ ಮಲಗಿದ್ದ ನಂಗೆ .... ಅಜ್ಜನೆಂಬ ಹಿರಿಯನ ಆದೇಶದ ಮೇರೆಗೆ ಈ ಇದೇ ನಮ್ಮ ಅಗ್ನಿಹೋತ್ರಿ ರಾಂ ಭಟ್ ಮಾಸ್ತರಿದ್ರಲೀ ಅವರ ದೊಡ್ದಪ್ಪನೋ ಅಜ್ಜನೋ ಆಗಿರವು ಪುರೋಹಿತರು.....ಅವರ ಎದುರಿಗೆ ಯನ್ನ ಅಪ್ಪ ಅಕ್ಕಿ ಕಾಳಿನ ಮ್ಯಾಲೆ ಬರದು ಜಾತಗ ಮಾಡಿಸಿದ ಹೆಸರು - ಮೇಘಶ್ಯಾಮ

ಮತ್ತೆ ನನ್ನ ಬಲಗೈ, ತಲೆಯ ಮ್ಯಾಲಿಂದವಾ ಎಡಗಿವಿಯ ಮುಟ್ಟತ ಇಲ್ಯ ಹೇಳಿ ನೋಡಿಯಾದ ಮೇಲೆ (ನನ್ನ ಜನ್ಮದಿನಾಂಕ ನೆನಪಿದ್ದರೂವ ಹಿರಿಯರು ನಡೆಸಿಗಂಡು ಬಂದ ವಿದ್ಯೆ - ರಿವಾಜು - ರೂಢಿ ಹೇಳಿ) ನನ್ನ ಶಾಲೆಗೆ ಸೇರಸಕಾರೆ ಭಟ್ಟ ಎಂಬ ಹೆಸರು ಬಪ್ಪಲಾಗ ಎಂಬ ಕಾರಣಕ್ಕ ಅಥವ  ಮುಂದೆಂದಾರೂ ಕಾನೂನೂ ಬದಲಾಗಿ ಹೆಸರನ್ನೊಂದೇ ನೋಡಿ  ಮೀಸಲಾತಿ ಕೊಡಗು ಎಂಬ ದೂರಾಲೋಚನೆಯಿಂದಲೋ ಮತ್ತೆ ಅದೇ ಅಜ್ಜನ ಅಧಿಕಾರದ ಆದೇಶದ ಮೇರೆಗೆ ಇಟ್ಟ ಅಧಿಕೃತ (official) - ಶಾಲಾ ನೋಂದಣಿಯ ಹೆಸರು ಬಿ ಪಿ ಎಮ್ ಶ್ಯಾಮ. ಪೂರ ಇದನ್ನು ಬಿಡಿಸಲೆ ಹೋದರೆ ’ಭಡ್ತಿ ಪರಮೇಶ್ವರನ ಮಗ ಮೇಘ ಶ್ಯಾಮ’ ಹೇಳಾಗವಡ (ಅದೇ ಅಜ್ಜನೇ ಹೇಳಿದ್ದು)  ಹೇಳಿ ತಿರಚಿ...ಖುದ್ದು ನಿಂತು ಇಟ್ಟ ಹೆಸರನ್ನೇ  ಛಿದ್ರ ಛಿದ್ರವಾಗಿಸಿದ (ಅಕ್ಕಿ ಕಾಳಿನ ಮರ್ಯಾದೆ ತೆಗದು) ಯನ್ನಜ್ಜ - ಪುಣ್ಯಾತ್ಮ ಅಂವ. ಅಲ್ಲ ಅವನ ತಪ್ಪಿಲ್ಯಪ... ಆವಾಗ ವನ್ನಮನೀ ಅಲೆ ಇತ್ತು.

ಸರಿ ಶಾಲೆಗೆ ಹೋಗಿ ಬಂದು ಮಾಡತಿದ್ದ ನಂಗೆ ನನ್ನ ಹೆಸರು ಬಿ ಪಿ ಎಮ್ ಶ್ಯಾಮನಿಂದ ಬದಲಾಗಿ ಬಿ ಪಿ ಎಮ್ ಶ್ಯಾಮು ವಾಗಿ ಪರಿಣಮಿಸಿದ್ದು ಗೊತ್ತಾಗಿದ್ದೇ ೭ ಮುಗದು ೮ ನೆತ್ತಿಗೆ ಹೋದಾಗ. ಆವಾಗ ಯನ್ನ ಮಾತ ಕೇಳವ್ಯಾರು?

ಸರಿಯಪಾ ಅಂತೂ ಇಂತೂ ಆಡ ಆಡತವ ೧೦ ಮುಗತ್ತು ... ಎಸ್ಸೆಸ್ಸೆಲ್ಸಿ ಸರ್ಟಿಪಿಕೇಟು ಬಂದಾಗ ಗೊತ್ತಾದದ್ದು - ಹಾಂ ನನ್ನ ಹೆಸರು ಶ್ಯಾಮು ಬಿ ಪಿ ಎಂ.

ಸರಿಯಪಾ... ಮುಗತ್ತು ಎಲ್ಲ ಯನ್ನ ಜೀವನದ ವ್ಯಾಸಂಗದ ಸಂಗ ಸಾಕು ಹೇಳಿ ಸರ್ವ ವ್ಯಾಸಂಗ ಪರಿತ್ಯಾಗಿಯಾಗಿ ನೌಕರಿಗೆ ಹೊರಟೆ. ಎರಡೆ ಮೂರೇ ವರ್ಷದಲ್ಲಿ ಯನ್ನ ಪಾನ್ ಕಾರಡು (PAN Card) ಮಾಡಸವು ಹೇಳದ ಕಂಪನಿಯವ್ವು. ಅದೆಂತಕೋ ಬೇಕಾಗ್ತಡ. ’ಸರಿ ನಿಂಗನೇ ಮಾಡಸಗಳಿ’ ಹೇಳಿ ಅನುಮತಿ ಕೊಟ್ಟೆ ತಗಳಪಾ.... ಯನ್ನ ಹೆಸ್ರನ ವನ್ನಮನಿ ಮತ್ತೊನ್ನಮನಿ ತಿದ್ದುಬುಟ ಅವು. ಮ್ಯಾಲಿಂದ ಅದೆಂತೋ ಅಪ್ಪನ ಹೆಸರೂ ಸೇರಿ ಬರವಡ ಹೇಳಿ ಯನ್ನ ಹೆಸರ ’ಶ್ಯಾಮ ಪರಮೇಶ್ವರ ಭಟ್ಟ’ ಹೇಳಿ ಮಾಡದ. ವನ್ನಮನೀ ಸರೀನೇಯ ಅನಿಸ್ತು ಯಂಗೆ ಆವಾಗ. ಯನ್ನ ಸಂತಿಗೆ ಅಪ್ಪಯ್ಯನೂ ಬಂದ ಹೇಳಿ ಖುಷಿನೇ ಆತು.

ಆತು ಅದಕೂ ತಲೆ ಕೆಡಿಸ್ಗಂಡಿದ್ನಿಲ್ಲೆ...... ಈಗ ಪಾಸಪೋರಟ ಮಾಡುವ ಪ್ರಸಂಗ ಬಂತು. ದರಿದ್ರ ಅದು. ಯಾನೇ ಬ್ಯಾರೆ ಬ್ಯಾರೆ ಹೇಳಾಗೋತು. ಈ ಬಿಪಿಎಂ ಶ್ಯಾಮು... ಶ್ಯಾಮು ಬಿಪಿಎಮ್ .....ಶ್ಯಾಮ ಪರಮೇಶ್ವರ ಭಟ್ಟ ಈ ಮೂರರಲ್ಲಿ ನೀ ಯಾರು ಅಂದ ಪೋಲೀಸನಂವಾ. ಆತ ಇಲ್ಯ. ಸಾಕಪಾ ಸಾಕು. !!

ಸರೀ .. ಈವಾಗ ಅಪ್ಪದಾಜು... ಮುಂದೆಂತ ಮಾಡವಪಾ ಹೇಳಿ ಅವಂದೇ ಭಾಷೆ (ಹಿಂದಿ) ಯಲ್ಲಿ ಕೇಳದೆ ಪೋಲೀಸಮಾವನ. ಅವನೇ ಉಪಾಯ ಹೇಳದ ಯೆಂತಪಾ ಅಂದ್ರೆ.... "ನೋಟರೀ ಹತ್ರ ಹೋಗು ... ವಂದು  ಅಫಿಡವಿಟ್ ಮಾಡಸು.... ಅದರ ಕಾಪಿ ತಗಂಡೋಗಿ ಯಾವುದಾದರೂ ಎರಡು ಪೇಪರಲ್ಲಿ (ದಿನಪತ್ರಿಕೆ .. ಅದೂ ವಂದು ಇಂಗ್ಲೀಷು ಇನ್ನೊಂದು ಸ್ಥಳೀಯ ಭಾಷೆಯಲ್ಲಿರವು) ಕೊಡು. ಕಡೆಗೆ ಮತ್ತೆ ಅರ್ಜಿ ಗುಜರಾಯಿಸು" ಹೇಳಿ... ಆತಾ... ಸರಿಯಪಾ ಅದೆಲ್ಲ ಮಾಡಿ ಈಗ ವನ್ನಮನಿ ಪಾಸಪೋರಟ್ ಮಾಡಕಂಡಾತು ಹೇಳಾತು. ಆದ ಖರ್ಚು ಬಿಡು... ಗಂಡ ಸತ್ತ ದುಃಖ ಬ್ಯಾರೆ.. ಬೋಳ್ ಕೆತ್ತದ ನೋವು ಬ್ಯಾರೆ ಹೇಳಿ ಹೇಳತ್ವಲೀ ಹಾಂಗೇಯ. ಈಗ ಎಲ್ಲ ನಿಶ್ಚಿಂತೆ ಹೇಳವಾಂಗೇನೂ ಇಲ್ಲೆ.... ಬ್ಯಾಂಕ್ ಅಕೌಂಟ್ ಲ್ಲಿ ವಂದು ಹೆಸರು.... ಪಾಸಪೋರಟಲ್ಲಿ ವಂದು ಹೆಸರು... ಎಲ್ಲ ವನ್ನಮನಿ ಚಿಂದಿ ಚಿತ್ರಾನ್ನ. 

ಹೋಗಲಿ ಈ ತಲೆಬಿಸಿ ಹೋಗಲಿ ಹೇಳೇ ಬರೆದ ಬರವಣಿಗೆ ಇದು ಬಿಲ.... ಈಗ ಗಜಾನನ ಗಣಪತಿ ಹೇಳಿ ಹೆಸರಿಟಗಂಡು ಗಜ್ಜು.. ಗಣು ಗಪ್ಪತಿ.. ಗಪ್ಪು ಹೇಳಿ ಕರೆತ್ವಿಲ್ಯ??!! ಅದಕಿಂತ ಯನ್ನ ಹೆಸರೇ ಅಡ್ಡಿಲ್ಲೆ,,... ಬಗೇಲಿ ಹೆಚ್ಚು ಕಮ್ಮಿ ಆದ್ರೂವ ಒಂಚೂರಾರು ಇದ್ದಲಿ... ತೊಂದರಿಲ್ಲೆ ಹೇಳಿ ಸಮಾಧಾನಮಾಡಕಂಡು ಬದಕ್ತ ಇದ್ದಾಜಪಾ... ದೇವರಿದ್ದಾ... ನೋಡಕತ್ತಾ... ದೊಡ್ಡಂವಾ ...ಅಲ್ದ?!! 

11 comments:

 1. ಮೇಘಶ್ಯಾಮ ಹೇಳ ಎಷ್ಟ್ ಚ೦ದದ ಹೆಸ್ರು ತಗಹೋಗಿ ಬದ್ಲಾಗ್ಸಿಗಿದ..! ಆಗ್ಲಿ ಶ್ಯಾಮ ಆರೂ ಉಳದ್ದಲೀ.. ಯಾರಿಗೆ ಎಷ್ಟ್ ಶಿಕ್ಕವು ಹೇಳಿ ಇರ್ತೋ ಅಷ್ಟೆ ಸಿಕ್ತು.. :))
  ಹೆಸರಿನ ಕತೆ ಚೊಲೋ ಆಜು..:))

  ReplyDelete
 2. ಹೌದು ವಿಜಯಶ್ರೀ ಅಕ್ಕಯ.... ಪಾಲಿಗೆ ಬಂದಿದ್ದೇ ಪಂಚಾಮೃತ ಅಲ್ದ.
  ಓದಿದ್ದಕ್ಕೆ ಧನ್ಯವಾದ... ಹೀಂಗೆ ಕಮೆಂಟ್ ವಗೀತವ ಯನ್ನ ಬೆನ್ನು ತಟ್ಟತವ ನೂರ್ಕಾಲ ಬಾಳು ಅಕಯಾ .

  ReplyDelete
 3. ಹಹ್ಹಾ.. ಈಗ ಪಿ ಅಂದ್ರೆ ನಿನ್ನ ಅಪ್ಪನ ಹೆಸರು ಹೋಗಿ ಪಟ್ಟಂಗದ ಶ್ಯಾಮ ಆಯ್ದೆ ಹೇಳಿ ಸುದ್ದಿ ಬಂತಪ ನಂಗೆ :)

  ReplyDelete
  Replies
  1. ಹಹ .. ಆಗಲಿ ಹರಿ... ಅದೂ ವಂದು ಸಮಾಧಾನವೇಯ. ಬೈ ದಿ ವೇ ಮಿಸ್ಸಿಂಗ್ ಪಟ್ಟಂಗ.

   Delete
 4. ಹಹ...ಈಗೆಂತ..ನಿಂಗ್ ಶ್ಯಾಮ ಹೇಳ್ ಕರ್ಯವ..ಮೇಘಶ್ಯಾಮ ಹೇಳವ ಇವನೇ ಹೇಳವ ತೆಳ್ಯಗಿದ್ದಾಂಗ್ ಆಗೋತಲ...

  ReplyDelete
 5. ಹಾಹಾ ಶ್ಯಾಮಾಯಣ

  ReplyDelete
 6. ಓಹೋ ಹೀಂಗೆಲ ಆಗದೆ ಕತೆ ವ್ಯಥೆ....:) ನಿರೂಪಣೆ ಚೊಲೊ ಆಜು...

  ReplyDelete
 7. Ha ha chennagiddo nin kate ...adu hangella alla sari maadsadu ...erdoo hesru beku antidre erdoo naneya anta affidavit maadsidre aatapa ...

  ReplyDelete
 8. ವೆ೦ಕಟು...ಹೌದ ಅಷ್ಟೇಯ? ಸಲ್ಪ ವಿವರ ಕೊಡಾ ಮಾರಾಯ. ಫೀಸ್ ಬೇಕಾರೆ ಕೊಡನ

  ReplyDelete